About Us

 ಡಾ. ಜೆ. ಪಿ. ದೊಡಮನಿ






        ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ೧ ಜೂನ್ ೧೯೬೪ರಂದು ಜನನ, ತೇರದಾಳದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಾಗೂ ಶ್ರೀ ಪ್ರಭುಲಿಂಗ ಹೈಸ್ಕೂಲಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ. ಶ್ರೀ ಶಿವಾನಂದ ಕಾಲೇಜು, ಕಾಗವಾಡ ಹಾಗೂ ಕಲಾ ವಾಣಿಜ್ಯ ಮಹಾವಿದ್ಯಾಲಯ, ರಾಯಬಾಗದಲ್ಲಿ ಪಿ.ಯು.ಸಿ ಹಾಗೂ ೧೯೮೭ರಲ್ಲಿ ಬಿ.ಎ.(ಕನ್ನಡ ಮೇಜರ್) ಪದವಿ. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಿಂದ ೧೯೮೯ರಲ್ಲಿ ಕನ್ನಡ ಎಂ.ಎ., ೧೯೯೧ರಲ್ಲಿ ಡಿಪ್ಲೋಮಾ ಇನ್ ಜೈನಾಲಜಿ, ೧೯೯೩ರಲ್ಲಿ ವಿಶ್ವವಿದ್ಯಾಲಯದ ಧನಸಹಾಯ ಆಯೋಗ ನಡೆಸಿದ ರಾಷ್ಟ್ರೀಯ A FF # (National Level Eligibility Test) sroderer. ಡಾ.ಎಸ್.ಪಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ "ಶರಣರ ಕುರಿತ ಕನ್ನಡ ಕಾದಂಬರಿಗಳು" ಮಹಾಪ್ರಬಂಧಕ್ಕೆ ೧೯೯೩ರಲ್ಲಿ ಸುವರ್ಣಪದಕ ಸಹಿತ ಪಿಎಚ್.ಡಿ. ಪದವಿ.

ಕರ್ನಾಟಕ ಕಲಾ ಕಾಲೇಜು, ಧಾರವಾಡದಲ್ಲಿ ಅತಿಥಿ ಉಪನ್ಯಾಸಕನಾಗಿ ೧೯೯೪ರಲ್ಲಿ ಸೇವೆ ಪ್ರಾರಂಭ. ಕರ್ನಾಟಕ ಲೋಕಸೇವಾ ಆಯೋಗದಿಂದ ಉಪನ್ಯಾಸಕ ಹುದ್ದೆಗೆ ೧೯೯೬ರಲ್ಲಿ ಆಯ್ಕೆ. ಸರಕಾರಿ ಪ್ರಥಮದರ್ಜೆ ಕಾಲೇಜು, ಸಿಂಧನೂರು ಹಾಗೂ ಐನಾಪೂರದಲ್ಲಿ ಕನ್ನಡ ಉಪನ್ಯಾಸಕನಾಗಿ ೧೯೯೬ರಿಂದ ೨೦೦೫ರವರೆಗೆ ಸೇವೆ ಸಲ್ಲಿಕೆ. ಸರಕಾರಿ ಪ್ರಥಮದರ್ಜೆ ಕಾಲೇಜು ಐನಾಪೂರದಲ್ಲಿ ೨೦೦೫ರಿಂದ ೨೦೦೭ವರೆಗೆ ಹಾಗೂ ಅಥಣಿಯಲ್ಲಿ ೨೦೦೭ರಿಂದ ೨೦೦೯ರವರೆಗೆ ಪ್ರಾಂಶುಪಾಲನಾಗಿ ಕರ್ತವ್ಯನಿರ್ವಹಣೆ, ದ್ರಾವಿಡಿಯನ್ ವಿಶ್ವವಿದ್ಯಾಲಯ, ಕುಪ್ಪಮ್, ಸಂಶೋಧನಾ ಮಾರ್ಗದರ್ಶಕನಾಗಿ ಕಾರ್ಯನಿರ್ವಹಣೆ, ಒಬ್ಬ ವಿದ್ಯಾರ್ಥಿ ಎಮ್.ಫಿಲ್. ಪದವಿ ಪಡೆದುಕೊಂಡಿದ್ದಾನೆ. ಪ್ರಸ್ತುತ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಜಮಖಂಡಿಯಲ್ಲಿ ಪ್ರೊಫೆಸರ್ ಪ್ರಾಂಶುಪಾಲರಾಗಿ ಸೇವೆಯಲ್ಲಿ ಮುಂದುವರಿಕೆ.

Post a Comment

0 Comments